ಶಿಕ್ಷಕರು ಮನೆಯಿಂದಲೇ ಕೆಲಸದಡಿಯಲ್ಲಿ ನಿರ್ವಹಿಸಿದ ಕಾರ್ಯಗಳ ವಿವರ GHS VASTARI TQ JEWARGI


                           ಶಿಕ್ಷಕರ ಹೆಸರು:  SHANTESH               ಮೊಬೈಲ್ ಸಂಖ್ಯೆ: 9972781300    

                                                        ಅಸೈನಮೆಂಟ್ (ನಿಯೋಜಿತ ಕಾರ್ಯ)---09

 ಮನೆಯಿಂದಲೇ ಕೆಲಸದಡಿಯಲ್ಲಿ ವೃತ್ತಿ ನೈಪುಣ್ಯತೆ ಹೆಚ್ಚಿಸಿಕೊಳ್ಳುವ ಕುರಿತು ಲೇಖನ


ಪೀಠಿಕೆ:

ಕಲಿಕೆ ಎನ್ನುವುದು ನಿಂತ ನೀರಲ್ಲ, ಅದು ನದಿಯಂತೆ.ವಿದ್ಯೆ ಎಬುಂದು ಎಂದುಗೂ ಮುಗುಯದು ಅಧ್ಯಾಯ, ಅದೊಂದು ನಿರಂತರ ಪ್ರಕ್ರಿಯೆ ಎನ್ನುವ ನುಡಿಯು ಕಲಿಕೆಯ ಮಹತ್ವವನ್ನು ಸಾರುತ್ತದೆ. ಶಿಕ್ಷಕ ಯಾವಾಗಲೂ ಸಮಾಜವನ್ನು ತಿದ್ದುವ, ದೇಶವನ್ನು ಕಟ್ಟುವ ನಿರ್ಮಾತೃ.ಇಂತಹ ಶಿಕ್ಷಕನ ಕಲಿಕೆಯು ಕ್ಷಣಿಕವಾಗಿ ನಿಂತರೆ ಮುಂದಿನ ಪರಿಸ್ಥಿತಿಯನ್ನು ಊಹಿಸಲೂ ಸಹ ಸಾಧ್ಯಾವಿಲ್ಲ.ಹಾಗಾಗಿ “ಒಬ್ಬ ಉತ್ತಮ ಶಿಕ್ಷಕ ಯಾವಾಗಲೂ ವಿದ್ಯಾರ್ಥಿಗಿರುತ್ತಾನೆ.

ಸಂಬಂಧ ಯುನೆಸ್ಕೋದ ಮಾಜಿ ಮಹಾ ನಿರ್ದೇಶಕರಾದ ಏರಿನ ಬೊಕೊವಾರವರು,”ಗುಣಾತ್ಮಕ ಶಿಕ್ಷಣಕ್ಕೆ ಸಂಬಂಧಿಸಿದಂದತೆ ಶಿಕ್ಷಕರಿಗಿರುವ ವೃತ್ತಿ ನೈಪುಣ್ಯತೆಯ ಜ್ಞಾನ ಮತ್ತು ಕೌಸಲ್ಯ ಅತ್ಯಂತ ಮಹತ್ವದ್ದಾಗಿದೆ”ಎಂದಿದ್ದಾರೆ.ಮೇಲಿನ ಮಾತು ಅಕ್ಷರಶಃ ಸತ್ಯ.ಒಂದು ದೇಶದ ಶಿಕ್ಷಣ ವ್ಯವಸ್ಥೆಯ ಗುಣಮಟ್ಟ ಅಲ್ಲಿನ ಶಿಕ್ಷಕರ ಗುಣಮಟ್ಟಕ್ಕಿಂತಲೂ ಹೆಚ್ಚಿರಲಾರದು.ಶಿಕ್ಷಕರ ಸೇವಾರ್ಫೂ ಹಾಗು ಸೇವಾನಿರತ ಶಿಕ್ಷಣ ತರಬೇತಿ ಮತ್ತು ಕೆಲಸ ನಿರ್ವಹಣೆಯ ಪರಿಸ್ಥಿತಿ ಹಾಗು ವಸ್ತುಸ್ಥಿತಿ ಇತ್ಯಾದಿ ವಿಷಯಗಳು ಶಿಕ್ಷಣದ ಒಟ್ಟು ಗುಣಾತ್ಮಕತೆಯ ಮೇಲೆ ಪ್ರಭಾವ ಬೀರುವ ಮಹತ್ವದ ಅಂಶಗಳಾಗಿರುತ್ತವೆ.

ಯಾವುದೇ ದೇಶದಲ್ಲಿ ಶಿಕ್ಷಕರಿಗೆ ನೀಡುವ ಶೈಕ್ಷಣಿಕ ಸವಲತ್ತುಗಳು ಹಾಗು ಅವರನ್ನು ನಡೆಸಿಕೊಳ್ಳವ ರೀತಿ ಶಿಕ್ಷಕರ ಸಾಮರ್ಥ್ಯವನ್ನು ಅಳೆಯುತ್ತದೆ.ಶೈಕ್ಷಣಿಕ ದೂರದೃಷ್ಟಿ ಹೊಂದಿರುವ,ಉತ್ತಮ ವ್ಯವಸ್ಥೆ ಕಲ್ಪಿಸಿದ ದೇಶ ಉತ್ತಮ ಶಿಕ್ಷಣಕ್ಕೆ ಮುನ್ನುಡಿ ಬರೆಯುತ್ತದೆ.ಇದು ಒಂದು ಕಡೆಯಾದರೆ ಇನ್ನೋಂದು ಕಡೆ ಹಲವಾರು ಅಡೆತಡೆಗಳು/ಅನಾನುಕೂಲಗಳ ಮದ್ಯೆ ಶಿಕ್ಷಕ ತನ್ನ ವೃತ್ತಿ ನೈಪುಣ್ಯತೆಯ ಜ್ಞಾನ ಮತ್ತು ಕೌಶಲವನ್ನು ವೃದ್ಧಿಸಿಕೊಂಡು ಗುಣಾತ್ಮಕ ಶಿಕ್ಷಣಕ್ಕೆ ಅಣಿಯಾಗುವುದು ಇಂದು ಶಿಕ್ಷಕರಿಗೆ ಸವಾಲಾಗಿದೆ.

ಶೈಕ್ಷಣಿಕ ಕ್ಷೇತ್ರದಲ್ಲಿ ಬದಲಾವಣೆಗಳು ಹೊಸದೇನಲ್ಲ.ಕಲಿಕೆಯಲ್ಲಿ ತೀವ್ರಗತಿಯ ಬದಲಾವಣೆ ತರುವ ನಿಟ್ಟನಲ್ಲಿ ಸರಕಾರ ಪ್ರಯತ್ನಪಡುತ್ತಲೇ ಇರುತ್ತವೆ.ತೀವ್ರ ಆರ್ಥಿಕ ಸಂಪನ್ಮೂಲದ ಹೊಳೆಯನ್ನೇ ಹರಿಸುತ್ತವೆ. ಕರ್ನಾಟಕದಲ್ಲಿ ಇತ್ತೀಚಿಗೆ ಜಾರಿಗೆ ಬಂದ TALP-IT@SCHOOL ಯೋಜನೆಯು ಶೈಕ್ಷಣಿಕ ಕ್ಷೇತ್ರದಲ್ಲಿ ಕ್ರಾತಿಯನ್ನೆ ತಂದಿದೆ ಎನ್ನಬಹುದು. ಇದರಿಂದಾಗಿ ಶಿಕ್ಷಕರು ತಂತ್ರಜ್ಞಾನವನ್ನು ಬಳಸಿ ಬೋಧನೆಯನ್ನು ಆಕರ್ಷಣೀಯಗೊಳಿಸಿ ವಿದ್ಯಾರ್ಥಿಗಳನ್ನು ಶಾಲೆಯ ಕಡೆಗೆ ಆಕರ್ಷಣೆಗೊಳಿಸಿದೆ. ಇನ್ನೊಂದು ಆಯಾಮದಲ್ಲಿ ಹೇಳುವುದಾದರೆ, ಹಲವಾರು ಶಿಕ್ಷಕರು ಇಂತಹ ತಂತ್ರಜ್ಞಾನದ ಕಲಿಕಾ ವಾತಾವರಣಕ್ಕೆ ಹೊಂದಾಣಿಕೆ ಮಡಿಕೊಳುವಲ್ಲಿ ತುಂಬಾ ಹರಸಾಹಸ ಪಡುವಂತಾಗಿದೆ.

ಇಂದು ಕೋವಿಡ-19 ಪ್ರಪಂಚವನ್ನೆ ಬಾಧಿಸುತ್ತಿರುವ ಸಂದರ್ಭದಲ್ಲಿ ಎಲ್ಲಾ ಶೈಕ್ಷಣಿಕ ಚಟುವಟಿಕೆಗಳು ಮುನ್ನಡೆಸುವುದು ಸವಾಲಾಗಿ ಪರಿಣಮಿಸಿದೆ.ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಶಿಕ್ಷಕರು ತಮ್ಮ ನೈಪುಣ್ಯತೆಯನ್ನು ಹೆಚ್ಚಿಸಲು ಈ ಕೆಳಕಂಡ ವಿಧಾನಗಳನ್ನು ಅನುಸರಿಸಬೇಕಾದ ಅನಿವಾರ್ಯತೆಯಿದೆ.

·        ತಂತ್ರಜ್ಞಾನಾಧಾರಿತ ಶಿಕ್ಷಣ ಕಲಿಕೆ

·        ಆನ್ಲೈನ ತರಬೇತಿ.

·        ಪಾಠೋಪಕರಣಗಳ ತಯಾರಿಕೆ.

·        ಯೂಟೂಬ್/ಆನ್ಲೈನ ಶೈಕ್ಷಣಿಕ ಕಾರ್ಯಕ್ರಮಗಳ ವೀಕ್ಷಣೆ

·        ದೂರದರ್ಶನ ವೀಕ್ಷಣೆ

·        ಮಕ್ಕಳೊಂದಿಗೆ ನಿರಂತರ ಸಂಪರ್ಕ ಸಾಧಿಸುವುದು……..ಇತ್ಯಾದಿಗಳು

ಹೀಗೆ  ಹತ್ತು ಹಲವು ಚಟುವಟಿಕೆಗಳನ್ನು ಶಿಕ್ಷಕರು ಅನುಸರಿಸುವುದರ ಮೂಲಕ ಶೈಕ್ಷಣಿಕ ಕ್ಷೇತ್ರದಲ್ಲಿ ನಿರಂತರವಾಗಿ ಸಕ್ರಿಯರಾಗಿ ತಮ್ಮ ಜ್ಞಾನಾರ್ಜನೆಯನ್ನು ಹೆಚ್ಚಿಸಿಕೊಳ್ಳುದರ ಮೂಲಕ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಂಡು ಗುಣಾತ್ಮಕ ಶಿಕ್ಷಣದೊಂದಿಗೆ ಒಂದು ಉತ್ತಮ ದೇಶ ಹಾಗೂ ಉತ್ತಮ ಸಮಾಜದ ನಿರ್ಮಾಣಕ್ಕೆ ನಾವೆಲ್ಲಾರೂ ಕರಣಿಕರ್ತರಾಗೋಣ.

 


Comments

Popular posts from this blog

ಶಿಕ್ಷಕರು ಮನೆಯಿಂದಲೇ ಕೆಲಸದಡಿಯಲ್ಲಿ ನಿರ್ವಹಿಸಿದ ಕಾರ್ಯಗಳ ವಿವರ GHS VASTARI

ಶಿಕ್ಷಕರು ಮನೆಯಿಂದಲೇ ಕೆಲಸದಡಿಯಲ್ಲಿ ನಿರ್ವಹಿಸಿದ ಕಾರ್ಯಗಳ ವಿವರ GHS VASTARI TQ JEWARGI